Shatasthalagalu
Author:
Annadhaniswara Mahaswamigalu
ವಚನ ವಾಙ್ಮಯ ಭಾರತೀಯ ಪರಂಪರೆಯ ಅಪೂರ್ವ ಸಾಂಸ್ಕøತಿಕ ಸಂಪತ್ತು. ಅಂತರಂಗದ ವಿಕಾಸದೊಂದಿಗೆ ಸಮುದಾಯದ ಕಲ್ಯಾಣವನ್ನೂ ರೂಪಿಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸಿದ ಶರಣರ ಸಾಹಿತ್ಯ ಇದು. ವ್ಯಕ್ತಿತ್ವ ನಿರ್ಮಾಣ ಹಾಗೂ ಸಮಾಜಪರ ಚಿಂತನೆಗಳಿಗೆ ಸಮರ್ಥ ವಾಹಕವಾಗಿ ವಚನನಿಧಿ ಸಂವೇದಿಸಿರುವುದು ಕನ್ನಡ ಸಾಹಿತ್ಯದ ಸೌಭಾಗ್ಯ. ಶಾಲಾಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಶರಣ ಸಂಸ್ಕøತಿ ಮಾಲೆ’ ಯಡಿಯಲ್ಲಿ ಶರಣರ ಸಾಹಿತ್ಯ, ಜೀವನದರ್ಶನ, ಧಾರ್ಮಿಕ ಮತ್ತು ಸಾಂಸ್ಕøತಿಕ ಪರಂಪರೆಯನ್ನು ಸ್ಥೂಲವಾಗಿ ಪರಿಚಯ ಮಾಡಿಕೊಡುವ 100 ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಗೆ ನಾಡಿನ ಖ್ಯಾತ ವಿದ್ವಾಂಸರು ಕೃತಿಗಳನ್ನು ರಚಿಸಿಕೊಟ್ಟಿದ್ದಾರೆ. ವೀರಶೈವ ಧಾರ್ಮಿಕ ಪರಿಕಲ್ಪನೆಗಳು, ಅರಸು ಮನೆತನಗಳು, ಪ್ರಮುಖ ಕವಿ-ಕೃತಿದರ್ಶನ ಹಾಗೂ ವಚನಸಾಹಿತ್ಯದ ವಿವಿಧ ಆಯಾಮಗಳು – ಈ ಮಾಲೆಯ ಒಟ್ಟು ಕೃತಿಗಳ ಉಪಶೀರ್ಷಿಕೆಗಳಾಗಿವೆ. ಈ ಎಲ್ಲ ಪುಸ್ತಕಗಳನ್ನು ಓದುವವರಿಗೆ ವಚನ ಸಾಹಿತ್ಯದ ಆಳ-ಅಗಲದ ವಿಹಂಗಮ ನೋಟ ಒಂದೆಡೆ ದೊರಕಿ, ಅವರ ಮುಂದಿನ ಅಧ್ಯಯನಕ್ಕೆ ದಿಕ್ಸೂಚಿ ದೊರೆಯುವಂತಾಗಬೇಕೆಂಬುದು ಈ ಯೋಜನೆಯ ಆಶಯ.
ಶರಣ ಸಂಸ್ಕøತಿಮಾಲೆಯಡಿಯಲ್ಲಿ ಈವರೆಗೆ 69 ಪುಸ್ತಕಗಳು ಹೊರಬಂದಿವೆ.
Product Details
Copyright:
Pages: 77
Price: 12 Rs.