Sharanara Vachanagalu

|||Sharanara Vachanagalu
Sharanara Vachanagalu2019-01-14T12:13:47+00:00

Sharanara Vachanagalu

Author:

ಕರ್ನಾಟಕ ಧಾರ್ಮಿಕ ಕ್ಷೇತ್ರದಲ್ಲಿ ನಡೆದ ವಚನ ಸಾಹಿತ್ಯ ಚಳುವಳಿಯ ಪರಿಣಾಮವಾಗಿ ಎಲ್ಲ ಜ್ಞಾನವೂ ದೇಶಭಾμÉಯಲ್ಲಿ ಹರಿದು ಬರುವಂತಾಯಿತು. ಮೊತ್ತಮೊದಲ ಬಾರಿಗೆ ಸಾಮಾಜಿಕ ಸಮಾನತೆಗಾಗಿ ಸುಸಂಘಟಿತವಾದ ಜನಾಂದೋಲನ ನಡೆಯಿತು; ಸ್ತ್ರೀಯರು, ದಲಿತರು ಮತ್ತು ಹಿಂದುಳಿದವರು ತಮ್ಮ ಅಂತರಂಗದ ಅನಿಸಿಕೆಗಳನ್ನು ಮುಕ್ತವಾಗಿ ಅಭಿವ್ಯಕ್ತಿಸುವ ಅವಕಾಶ ದೊರೆಯಿತು. ಈ ಚಳುವಳಿಯ ಅಮೃತಫಲವಾದ ವಚನಗಳು ಕಾಲಗರ್ಭದಲ್ಲಿ ಹೊತುಹೋಗಿತ್ತು. ನಾಡಿನವರ ಪುಣ್ಯವೆಂಬಂತೆ ಈ ತವನಿಧಿಯು 19 ನೆಯ ಶತಮಾನದಲ್ಲಿ ಬೆಳಕು ಕಂಡದ್ದು ಕನ್ನಡಿಗರ ಸೌಭಾಗ್ಯ. ಸಹೃದಯರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಜೆಎಸ್‍ಎಸ್ ಗ್ರಂಥಮಾಲೆಯು ಈ ವಚನಗಳಿಗೆ ಸರಳವಾದ ವ್ಯಾಖ್ಯಾನಗಳನ್ನು ಸಿದ್ಧಪಡಿಸಿದೆ. ಈ ಮಾಲಿಕೆಯಲ್ಲಿ ಈಗಾಗಲೇ ಬಸವಣ್ಣ, ಅಲ್ಲಮಪ್ರಭು, ಚನ್ನಬಸವಣ್ಣ, ಘನಲಿಂಗದೇವ ಮತ್ತು ಅಕ್ಕಮಹಾದೇವಿಯರ ಮತ್ತು ವಿವಿಧ ಶರಣರ ಆಯ್ದ ವಚನಗಳ ವ್ಯಾಖ್ಯಾನದ ಸಂಪುಟಗಳು ಹೊರಬಂದಿವೆ.

Product Details

Publisher: Sri Jagadguru Shivrathrewara Ghranthmale, Mysore
Copyright:
Pages: 320
Price: 180 Rs.